1. ಬಿ.ಆರ್.ಟಿ.ಎಸ್ ಬಸ್ಗಳ ಕಾರ್ಯಾಚರಣೆಯನ್ನು 02-10-2018 ರಿಂದ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ. 2. ಎಚ್ಡಿಬಿಆರ್ಟಿಎಸ್ ಅನ್ನು ಅಧಿಕೃತವಾಗಿ 02-02-2020 ರಂದು ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಎಂ.ವೆಂಕಯ್ಯ ನಾಯ್ಡು ರವರು ಉದ್ಘಾಟಿಸಿದರು. 3. ಇ-ಪರ್ಸ್ ಸ್ಮಾರ್ಟ್ ಕಾರ್ಡ್ ಬಳಸಿ ಮತ್ತು 10% ರಿಯಾಯಿತಿ ಪಡೆಯಿರಿ. 4. ಹೆಚ್ಚಿದ ಪ್ರಯಾಣಿಕರ ಸಂಖ್ಯೆ ಮತ್ತು ಬೇಡಿಕೆಯ ನಿಮಿತ್ತವಾಗಿ ದಿನಾಂಕ 28-10-2021 ರಿಂದ ರಾತ್ರಿ 11:00 ರವರೆಗೆ ಬಿ.ಆರ್.ಟಿ.ಎಸ್ ಬಸ್ ಕಾರ್ಯಾಚರಣೆನ್ನು ವಿಸ್ತರಿಸಲಾಗಿದೆ*
ನಮ್ಮ ಬಗ್ಗೆ
ಪ್ರಯಾಣ ಮಾಹಿತಿ
ಸ್ಮಾರ್ಟ್ ಕಾರ್ಡ್
ಮಾಹಿತಿ
ಕುಂದುಕೊರತೆಗಳು
ಆಕರ್ಷಣೆಗಳು
ಗ್ಯಾಲರಿ
ಸಂಪರ್ಕಿಸಿ
HDBRTS ನಲ್ಲಿ ಪ್ಯಾನಲ್ ವಕೀಲರ ನೇಮಕಾತಿಯ ಪ್ರಕಟಣೆ. Download Form and Notification
ಭಾರತ ಸರ್ಕಾರವು ಕೊಡಮಾಡುವ “ಉತ್ತಮ ನಗರ ಸಮೂಹ ಸಾರಿಗೆ ಯೋಜನೆ”(Best Urban Mass Transit Project) ವರ್ಗದಡಿ ಕೊಡಮಾಡುವ Award of Excellence-2019 ಪ್ರಶಸ್ತಿಯನ್ನು ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್ ಯೋಜನೆಯು ಪಡೆದುಕೊಂಡಿದೆ.
ಅಧಿಕೃತವಾಗಿ ಸ್ಮಾರ್ಟ್ ಕಾರ್ಡ್, ವೆಬ್-ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನು ದಿನಾಂಕ 10-01-2020 ರಂದು ಶ್ರೀ. ಜಗದೀಶ್ ಶೆಟ್ಟರ್ ದೊಡ್ಡ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಸಚಿವರು, ಬೆಳಗಾವಿ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿದರು.
ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್ ಯೋಜನೆಯು ಸ್ಕಾಚ್ ಸಂಸ್ಥೆಯು ಪರಿಸರ ಮತ್ತು ಸುಸ್ಥಿರತೆ ವರ್ಗದಡಿ ಕೊಡಮಾಡುವ 2020 ರ ಸಾಲಿನ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಪ್ರಶಸ್ತಿಯನ್ನು ಪ್ರಶಸ್ತಿ ಆಯ್ಕೆ ಸಮಿತಿಯು ಯೋಜನೆಯಡಿ ಅನುಷ್ಠಾನಗೊಳಿಸಲಾದ ಎಲ್ಲಾ ಮೂಲಭೂತ ಸೌಕರ್ಯಗಳು ಮತ್ತು ಸಾರಿಗೆ ವ್ಯವಸ್ಥೆಯಲ್ಲಿನ ಪೂರಕ ಸೌಲಭ್ಯಗಳನ್ನು ಪರಿಗಣಿಸಿ ನೀಡಿರುತ್ತದೆ.
ಚಿಗಾರಿ ಬಿ.ಆರ್.ಟಿ.ಎಸ್ ವೀಡಿಯೊ ಕ್ಲಿಪ್
ಹೊಸೂರು ಹೊಸ ಬಸ್ ನಿಲ್ದಾಣದಿಂದ ಹೊರಡುವ ಬಸ್ಸುಗಳ ಮಾಹಿತಿಗಾಗಿ 7760991662 ಗೆ ಕರೆ ಮಾಡಿ
ಹೆಚ್ಚಿದ ಪ್ರಯಾಣಿಕರ ಸಂಖ್ಯೆ ಮತ್ತು ಬೇಡಿಕೆಯ ನಿಮಿತ್ತವಾಗಿ ದಿನಾಂಕ 28-10-2021 ರಿಂದ ರಾತ್ರಿ 11:00 ರವರೆಗೆ ಬಿ.ಆರ್.ಟಿ.ಎಸ್ ಬಸ್ ಕಾರ್ಯಾಚರಣೆನ್ನು ವಿಸ್ತರಿಸಲಾಗಿದೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಮಧ್ಯದಲ್ಲಿ ಸುಸ್ಥಿತ ಸಾರಿಗೆ ಕಲ್ಪಿಸುವದಕ್ಕಾಗಿ ಕೈಗೆತ್ತಿಕೊಳ್ಳಲಾಗಿರುವ “ಹುಬ್ಬಳ್ಳಿ-ಧಾರವಾಡ ತ್ವರಿತ ಬಸ್ ಸಾರಿಗೆ ವ್ಯವಸ್ಥೆ’(Hubballi-Dharwad Bus Rapid Transit system (HDBRTS) ದೇಶದಲ್ಲಿಯೇ ವಿಶಿಷ್ಠವಾಗಿರುವ ಯೋಜನೆಯಾಗಿದ್ದು, ಯೋಜನೆಯ ಅನುಷ್ಠಾನಕ್ಕಾಗಿ ಕಂಪನಿ ಕಾಯ್ದೆಯಡಿ ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್ ಕಂಪನಿ ನಿಯಮಿತ ಎಂದು 07-05-2012 ರಂದು ನೋಂದಣಿಯಾಗುವ ಮೂಲಕ ತನ್ನ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುತ್ತಿದೆ ಮತ್ತು ಈ ಕಂಪನಿಯಲ್ಲಿ ಸಹ ಇಲಾಖೆಗಳು ಸದಸ್ಯತ್ವವನ್ನು ಹೊಂದಿವೆ.
ಹುಬ್ಬಳ್ಳಿ-ಧಾರವಾಡ ತ್ವರಿತ ಬಸ್ ಸಾರಿಗೆ ವ್ಯವಸ್ಥೆ ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅನುಷ್ಠಾನಗೊಂಡಿರುವಬಿ.ಆರ್.ಟಿ.ಎಸ್ ಯೋಜನೆಯಾಗಿದ್ದು, ಶೀಘ್ರ, ಸುರಕ್ಷಿತ, ಸುಖಕರ ಹಾಗೂ ಕೈಗೆಟುಕುವ ದರದಲ್ಲಿ ಹೆಚ್ಚು ಪ್ರಯಾಣಿಕರನ್ನು ನಿರ್ದಿಷ್ಟ ಸಮಯದಲ್ಲಿ ನಿಗದಿತ ಸ್ಥಳಕ್ಕೆ ತಲುಪಿಸುವ ಪ್ರಮುಖ ಉದ್ದೇಶ ಈ ಯೋಜನೆಯದಾಗಿದೆ. ಇದನ್ನು ರಸ್ತೆ ಮೇಲೆ ಚಲಿಸುವ ಮೆಟ್ರೋ ವಿಧಾನ ಎಂದು ಸಹ ಕರೆಯಬಹುದಾಗಿದ್ದು ಯೋಜನೆಯಡಿ ಖರೀದಿಸಲಾದ ವೋಲ್ವೊ ಬಸ್ಗಳಿಗೆ ಸ್ಥಳೀಯ ನಾಗರಿಕರು ಸೂಚಿಸಿದಂತೆ ‘ಚಿಗರಿ’ಎಂದು ಹೆಸರಿಸಲಾಗಿದೆ.
ಯೋಜನೆಯ ವಿನ್ಯಾಸದಂತೆ ಈಗಾಗಲೇ ಎಲ್ಲಾ ಮೂಲಭೂತ ಸೌಕರ್ಯದ ಕಾಮಗಾರಿಗಳನ್ನು ಪೂರ್ಣಗೊಳಿಸಿ 02-10-2018 ರಿಂದ ಯೋಜನೆಯು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಹಯೋಗದೊಂದಿಗೆ ‘ಚಿಗರಿ’ಬಸ್ಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ಯೋಜನೆಯಲ್ಲಿ ಅಳವಡಿಸಿಕೊಂಡಿರುವ ಸಮಗ್ರ ಸಂಗತಿಗಳನ್ನು ಪರಿಗಣಿಸಿ ಭಾರತ ಸರ್ಕಾರವು ಕೊಡಮಾಡುವ “ಉತ್ತಮ ನಗರ ಸಮೂಹ ಸಾರಿಗೆ ಯೋಜನೆ”(Best Urban Mass Transit Project) ವರ್ಗದಡಿ ಕೊಡಮಾಡುವ Award of Excellence-2019 ಪ್ರಶಸ್ತಿಯನ್ನು ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್ ಯೋಜನೆಯು ಪಡೆದುಕೊಂಡಿದೆ. ಯೋಜನೆ ಕಾರ್ಯಾಚರಣೆ ಪ್ರಾರಂಭಿಸಿ ಒಂದೇ ವರ್ಷದಲ್ಲಿ ರಾಷ್ಟೀಯ ಮಟ್ಟದ ಪ್ರಶಸ್ತಿ ಗಳಿಸಿರುವ ಹೆಮ್ಮೆಯ ಹೆಗ್ಗಳಿಕೆ ಅವಳಿ ನಗರಕ್ಕೆ ಸಲ್ಲುತ್ತದೆ.